『ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೧』のカバーアート

ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೧

ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು - ೧

無料で聴く

ポッドキャストの詳細を見る

このコンテンツについて

ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು


ನಮ್ಮ ಎಲ್ಲಾ ಆಧ್ಯಾತ್ಮ ಬಂಧುಗಳಲ್ಲಿ ಅನಂತಾನಂತ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ನಮ್ಮ ಸಂಸ್ಥೆ ಶ್ರೀ ವರದವಿಠಲದಾಸಸಾಹಿತ್ಯ ಅಧ್ಯಯನ ಕೇಂದ್ರ, ಕೌತಾಳಂ ಸಾ|| ಸಿರವಾರ ವತಿಯಿಂದ ಜ್ಞಾನ ಪ್ರಸಾರಣಾ ಕೈಕಂರ್ಯದಲ್ಲಿ ಈಗಾಗಲೇ ನಮ್ಮ ಪೋಡ್ಕಾಸ್ಟ “ವರದ ಪೋಡ್ಕಾಸ್ಟ” ನಲ್ಲಿ ಕೆಲವು ವಿಷಯಗಳು ಹಂಚಿಕೊಂಡಿದ್ದು, ಇದು ಯುಟೂಬ್, ಸ್ಪಾಟಿಫೈ ನಲ್ಲಿ ಲಭ್ಯವಿದ್ದು ಇದರ ಸವಿಯನ್ನು ಹರಿದಾಸರ ದಾಸಾನು ದಾಸರಾದ ತಾವುಗಳು ಆಸ್ವಾದಿಸಿದ್ದೀರಿ. ಇದರ ಮುಂದಿನ ಪ್ರಯತ್ನವೇ ಈ ಹೊಸ ಸರಣಿಯಾದ “ಶ್ರೀ ಕೌತಾಳಂ ಅಶ್ವಥರಾಯರು ಕಂಡ ಶ್ರೀ ವಿಜಯಯಪ್ರಭುಗಳು” ಶ್ರೀ ಕೌತಾಳಂ ಅಶ್ವಥರಾಯರು ಶ್ರೀ ಗುರುಜಗನ್ನಾಥದಾಸಾರ್ಯರ ಪ್ರಿಯ ಹಾಗೂ ಪ್ರಥಮ ಶಿಷ್ಯರಾದ ಶ್ರೀ ವರದವಿಠಲದಾಸಾರ್ಯರ ಪೌತ್ರ. ಇವರು ವಿಜಯ ಪ್ರಭುಗಳ ಮೇಲೆ ಅಪಾರವಾದ ಭಕ್ತಿ ಹೊಂದಿದ್ದು ದಾಸಾರ್ಯರ ೨೦೦ ಕ್ಕೂ ಹೆಚ್ಚು ಪದ, ಉಗಾಭೋಗ, ಸುಳಾದಿಗಳ ಅಧ್ಯಯನ ಮಾಡಿದ್ದಾರೆ. ಇದರ ಪೂರ್ವಾಭಾವಿಯಾಗಿ “ವಿಜಯ ದಾಸರ ಕವಚ” ಎಂದು ಪ್ರಸಿದ್ದಿಕೊಂಡಿರುವ ಶ್ರೀವ್ಯಾಸವಿಠಲಾಂಕಿತರಿಂದ ರಚನೆಕೊಂಡ ಈ ಪದದ ಅರ್ಥ ಅಶ್ವತ್ಥರಾಯರು ಬರೆದಿದ್ದು ಅದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವುದೇ ನಮ್ಮ ಸಂಸ್ಥೆಯ ಕರ್ತವ್ಯ. ಇದನ್ನು ನೀವುಗಳು ಆಸ್ವಾದಿಸಿ, ನಮನ್ನು ಹರಿಸಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.

まだレビューはありません